ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2015
ಅ - ವಿಭಾಗ
1. ಒಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ. 1x10=10
1. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾ ದೇವತೆ ಯಾರು?
2. ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ಯಾರು?
3. ಲಕ್ಷ ದಾರಿಗಳ ಚದುರಂಗದಾಟ ಯಾವುದು?
4. ಚಿತ್ತವನ್ನು ಯಾವುದಕ್ಕೆ ಹೋಲಿಸಲಾಗಿದೆ?
5. ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು ಯಾರು?
6. ಮನೋರಮೆ ಬಹುಮಾನವಾಗಿ ಮುದ್ದಣನಿಗೆ ಏನನ್ನು ಕೊಡುವೆನೆಂದಳು?
7. ಕಲಿಯುಗದ ಅಮೃತ ಯಾವುದು?
8. ಕೃಷ್ಣೇಗೌಡನ ಆನೆಯ ಮಾವುತನ ಹೆಸರೇನು?
9. ಶಿವೇಗೌಡರು ರಾತ್ರೋರಾತ್ರಿ ಅನೆ ಕರೆದುಕೊಂಡು ಹೋದುದೇಕೆ?
10. ಕೃಷ್ಣೇ ಗೌಡನನ್ನು ಕೊನೆಯಲ್ಲಿ ಕಾಡಿದ ಕಳವಳವೇನು?
ಆ
ವಿಭಾಗ
ಅ) ಯಾವುದಾದರೂ ನಾಲ್ಕು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. 2x4=8
11. ರಾವಣನು ಸೊಕ್ಕಿನಿಂದ ಸೀತೆಯನ್ನು ಉದ್ದೇಶಿಸಿ ಆಡಿದ ಮಾತುಗಳಾವುವು?
12. ಉರಿಲಿಂಗಪೆದ್ದಿಯ ಪ್ರಕಾರ ಗುರುವಿನ ಲಕ್ಷಣಗಳೇನು?
13. ಜಾಲಿಯಮರದ ನಿರರ್ಥಕತೆಯನ್ನು ಪುರಂದರ ದಾಸರು ಹೇಗೆ ತಿಳಿಸಿದ್ದಾರೆ?
14. ಮುಂಬೈ ಜಾತಕ ಕವಿತೆಯಲ್ಲಿ ಚಿತ್ರಿಸಿರುವಂತೆ ಮಗು ಹುಟ್ಟಿ, ಬೆಳೆದುದು ಎಲ್ಲಿ?
15. ದನಗಳಿಗೆ, ಜನಗಳಿಗೆ ಏನೇನು ಇಲ್ಲ?
ಆ) ಯಾವುದಾದರೂ ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. 2x3=6
16. ಸಿಂಹಬಾಲದ ಕೋತಿಗಳಿಗೆ ಒದಗಿದ ತೊಂದರೆ ಎನು?
17. ಕಲಾಂ ಅವರ ಬದುಕಿನ ಮಂತ್ರ ಯಾವುದು?
18. ನೀರಿಳಿಯದ ಗಂಟಲಿನಲ್ಲಿ ಕಡುಬನ್ನು ತುರುಕಿದಂತಾಯ್ತು ಎಂದು ಮನೋರಮೆ
ಹೇಳಿದ್ದೇಕೆ?
19. ಪಟ್ಟಣದ ಹೋಟೆಲಿನ ಕಟ್ಟಡ ಹೇಗಿದೆ?
ಇ) ಯಾವುದಾದರೂ ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. 2x3=6
20. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಜಿಸಿದರು?
21. ಕಾಡಪ್ಪಶೆಟ್ಟರು ಯಾವ ವರ್ತಮಾನವನ್ನು ಮುಟ್ಟಿಸಿದರು?
22. ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಹೇಳಿದ್ದೇನು?
23. ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು?
ಇ ವಿಭಾಗ
3. ಅ) ಎರಡನ್ನು ಕುರಿತು ಸಂದರ್ಭ ಸಹಿತ ವಿವರಿಸಿ
3x2=6
24. ಕಲಿಭೀಮನೇ ಮಿಡುಕುಳ್ಳ ಗಂಡನು
25. ಆಪತ್ತಿನೊಳ್ ಮಣಿದು ನೋಡದ ಬಂಧುವೇತಕೆ
26. ಬಲೆ ಬೀಸಿ ಬಂದ, ಅಗೋ ಬೆಳಕು ಬೇಟೆಗಾರ
ಆ) ಒಂದರ ಸಂದರ್ಭ ಸ್ವಾರಸ್ಯ
ವಿವರಿಸಿ. 3x1=3
27. ಹಾಡುವುದು ಅವುಗಳಿಗೆ ಅನಿವಾರ್ಯ ; ಅವುಗಳ ಕರ್ಮ !
28. ಕನ್ನಡಿಗರು ಮೊದಲು ಕನ್ನಡದವರಾಗಬೇಕು.
ಇ) ಒಂದರ ಸಂದರ್ಭ ಸ್ವಾರಸ್ಯ
ವಿವರಿಸಿ. 3x1=3
29. ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದ ಹಾಗೆ
30. ಕೃಷ್ಣೇಗೌಡರ ಅನೆಗೂ ಕಚ್ಚಿದೆ ಅಂತ ವರ್ತಮಾನ ಉಂಟಪ್ಪ
ಅ) ಮೂರು ಪ್ರಶ್ನೆಗಳಿಗೆ ಐದು-
ಆರು ವಾಕ್ಯಗಳಲ್ಲಿ ಉತ್ತರಿಸಿ. 4x3=12
31.ಶಿವಪಥವನ್ನರಿಯದವನ ಭಕ್ತಿ
ನಿರರ್ಥಕವೆಂಬುದನ್ನು ಬಸವಣ್ಣ ಯಾವ ಯಾವ
ಉದಾಹರಣೆಗಳ ಮೂಲಕ
ವಿವರಿಸಿದ್ದಾರೆ?
32. ತನಗಾದ ಅವಮಾನವನ್ನು ದ್ರೌಪದಿ
ಭೀಮನಿಗೆ ಹೇಳಿಕೊಂಡ ಬಗೆಯನ್ನು ವಿವರಿಸಿ.
33. ಜನಪದರು ಹೇಳುವಂತೆ ನಮ್ಮ ನೆರೆಹೊರೆ ಹೇಗಿರಬೇಕು? ವಿವರಿಸಿ.
34. ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ? ವಿವರಿಸಿ.
ಆ) ಎರಡು ಪ್ರಶ್ನೆಗಳಿಗೆ ಐದು-
ಆರು ವಾಕ್ಯಗಳಲ್ಲಿ ಉತ್ತರಿಸಿ. 4x2=8
35. ಬಸಲಿಂಗ ಡಾ| ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೇ ಇರಲು ಕಾರಣವೇನು?
36. ಕಮಲಾ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಮೂಡಿದ್ದೇಕೆ?
37. ಪಾತ್ರೆಗಳು ನೀರುಪಾಲಾದುದು ಹೇಗೆ? ಅವುಗಳನ್ನು ಮೇಲೆತ್ತಲು ಮಾಡಿದ
ಪ್ರಯತ್ನಗಳೇನು?
ಇ) ಎರಡು ಪ್ರಶ್ನೆಗಳಿಗೆ ಐದು-
ಆರು ವಾಕ್ಯಗಳಲ್ಲಿ ಉತ್ತರಿಸಿ. 4x2=8
38. ಕೃಷ್ಣೇ ಗೌಡನ ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ
39. ಟೆಲಿಫೋನ್ ಲೈನ್ ಮೆನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
40. ನಾಗರಾಜನ ನಿಗೂಢ ಕಣ್ಮರೆಯ ಬಗ್ಗೆ ಜನರ ಅಭಿಪ್ರಾಯಗಳೇನು?
ಕೆಳಗಿನ ಪದ್ಯಭಾಗಗಳಲ್ಲಿ
ಯಾವುದಾದರೂ ಒಂದರ ಭಾವಾರ್ಥ ಬರೆಯಿರಿ. 5x1=5
41.
ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ
ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದಲ್ತೆ
ನೀಲೀರಾಗಂ
42.
ಹಂಚಿಕೊಂಡಿದ್ದಾರೆ ಅಪ್ಪ ಅಮ್ಮನನ್ನು
ಇಲ್ಲಿ ದೊಡ್ಡಮಗನ ತಾವಲ್ಲಿ
ಮುದುಕಿ, ಸದ್ಯ ಕನ್ನಡದೇಶ
ಮಗ ಸೊಸೆ ಹೊರಗೆ ಹೋದಾಗಲಾದರೂ
ನಾಲ್ಕು ಮಾತಾಡಿ
ತೀರಿಸಿಕೊಳ್ಳುತ್ತಾಳೆ
ಬಾಯಿತುರಿಕೆ, ಪಾಪ ಮುದುಕ ದೂರದ
ಅಸ್ಸಾಮಿನಲ್ಲಿ, ಅಲ್ಲಿಯಮಾತು
ಅವನಿಗೆ ಸಸೆಮಿರ ಬರದು.
ಭಾಷಾಭ್ಯಾಸ:
ಕೆಳಗಿನ ಯಾವುದಾದರೂ ಆರು
ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ. 2x6=12
43. ಈ ಪದಗಳಿಗೆ ಅರ್ಥ ಬರೆಯಿರಿ :
೧. ಮಾರ ೨. ಗಾಲಿ
44. ಈ ಪದಗಳಿಗೆ ಸಮಾನಾರ್ಥ ಬರೆಯಿರಿ
: ೧. ಭೂಮಿ ೨.
ಮನೆ
45. ಈ ಪದಗಳ ತದ್ಭವ ರೂಪ ಬರೆಯಿರಿ : ೧. ಯೋಗಿ ೨. ಮುಖ
46. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ ಬಳಸಿ : ೧. ತಲೆಬಾಗು ೨. ಕೈಯೊಡ್ಡು
47. ಈ ಪದಗಳ ಗುಣವಾಚಕಗಳನ್ನು ಗುರುತಿಸಿ. :
೧. ಹೆಮ್ಮರ ೨. ಶುದ್ಧನೀರು
48. ಈ ಕ್ರಿಯಾಪದಗಳ ಧಾತು
ಗುರುತಿಸಿ : ೧. ಹಾಡುವಳು ೨. ಕಲಿಯುವರು
49. ಇವುಗಳ ಕಾಲಸೂಚಕಗಳನ್ನು ಬರೆಯಿರಿ : ೧. ಬರುವರು ೨. ನೋಡಿತು.
ಯಾವುದಾದರೂ ಒಂದನ್ನು ಕುರಿತು ಪ್ರಬಂಧ ಬರೆಯಿರಿ 5x1=5
50. ನನ್ನ ಬಾಲ್ಯದ ನೆನಪುಗಳು
51. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ
ಪತ್ರಲೇಖನ 4x1=4
52. ನೀವು ಕೈಗೊಂಡ ಶೈಕ್ಷಣಿಕ ಪ್ರವಾಸದ ಕುರಿತು ನಿಮ್ಮ ಗೆಳೆಯ/ಗೆಳತಿಗೆ ಒಂದು ಪತ್ರ
ಬರೆಯಿರಿ.
53. ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶ ಕೋರಿ ಬ್ಯಾಂಕಿನ
ವ್ಯವಸ್ಥಾಪಕರಿಗೆ ಒಂದು ಪತ್ರ ಬರೆಯಿರಿ.
ಈ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ
ಬರೆಯಿರಿ. 4x1=4
54. ಆಳಾಗಿ ದುಡಿ ಅರಸಾಗಿ ಉಣ್ಣು
55. ತಾಳಿದವನು ಬಾಳಿಯಾನು
The Tale of a Steel Chef - Titanium Panels
ReplyDeleteT.I.I.S. is based in Tautres, Spain, that 2020 edge titanium chef takes inspiration from the greats of China, the world, properties of titanium and titanium legs its titanium hammer best dining spots. nano titanium by babyliss pro