Tuesday, March 1, 2016


೨೦೧೬ರ ವಾರ್ಷಿಕ ಪರೀಕ್ಷೆಗೆ ಗಮನಿಸಬೇಕಾದ ಪ್ರಶ್ನೆಗಳು


ಕೃಷ್ಣೇಗೌಡನ ಆನೆ
ಸಂದರ್ಭದ ಪ್ರಶ್ನೆಗಳು :-
·       ನಮ್ಮಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ
·       ಆನೆ ಸಾಕುವುದು ಎಂದರೆ ಎಲೆಕ್ಷನ್ ಗೆ ನಿಂತಹಾಗೆ
·       ಆನೆಗೂ ಮಾನ ಮಾನ ಮರ್ಯಾದೆ ಇರುತ್ತೆ ತಿಳುಕೋ
·       ನಿನ್ನ ಪುಕಾರೇನಿದ್ದರೂ ಬರವಣಿಗೇಲಿ ಇರಬೇಕು
·       ಕುಶಾಲಿಗಂತ ಸೊಂಡಿಲು ಬೀಸಿದರೆ ಸಾಕಲ್ಲ
·       ಮುನ್ಸಿಪಲ್ ಪ್ರೆಸಿಡೆಂಟಾಗಿ ಊರನ್ನು ಸ್ವಚ್ಛವಾಗಿಡೋದು ನಿಮ್ಮ ಕರ್ತವ್ಯ
·       ಆನೆ ಬೇಲಿದಾಟಿ ಹೋಯ್ತುಸಾರ್
·       ಕಂಬದಮೇಲೆ ಯಾಕೋ ಕೈಲಾಸಕಂಡಹಾಗೆ ಇದೆಯಲ್ಲ.

ಒಂದುವಾಕ್ಯದ ಪ್ರಶ್ನೆಗಳು:-
o      ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದ?
o      ಕೃಷ್ಣೇಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?
o      ಆನೆಯ ಮಾವುತನ ಹೆಸರೇನು?
o      ಪೋಸ್ಟ್ ಮನ್ ಜಬ್ಬಾರನಿಗೆ ಒದಗಿದ ತೊಂದರೆ ಏನು?
o      ಟೆಲಿಫೋನ್ ಸಿಬ್ಬಂದಿ ಯಾರ ವಿರುದ್ಧ ಮುಷ್ಕರ ಹೂಡಿದರು?
o      ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?
o      ನಿರೂಪಕರಿಗೆ ಯಾವಕೆಲಸ ಖಾಯಂ ಆಗಿತ್ತು?
o      ಮುನ್ಸಿಪಾಲಿಟಿ ಪ್ರೆಸಿಡೆಂಟ್ ಹೆಸರೇನು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
§       ದುರ್ಗಪ್ಪ ಏಕೆ ಬಂದಿರಬೇಕೆಂದು ನಿರೂಪಕರು ಯೋಚಿಸಿದರು?
§       ಕೃಷ್ಣೇಗೌಡರ ಆನೆ ಹುಟ್ಟಿಬೆಳೆದ ಬಗೆ?
§       ಕಾಡಪ್ಪ ಶೆಟ್ಟರು ಯಾವವರ್ತಮಾನವನ್ನು ಮುಟ್ಟಿಸಿದರು?
§       ಫಾರೆಸ್ಟ್ ಡಿಪಾರ್ಟಮೆಂಟ್ ನವರ ನಂಬರ್ ಒನ್ ಎನಿಮಿಗಳು ಯಾರು ಯಾರು?
§       ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ್ದು ಹೇಗೆ?
§       ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಏನು ಹೇಳಿದ?
§       ಹುಚ್ಚುನಾಯಿಗಳು ಆಸ್ಪತ್ರೆ ಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದ?
§       ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರ ಪ್ರತಿಕ್ರಿಯೆ ಏನು?
§       ಆನೆಯನ್ನು ಹದ್ದುಬಸ್ತಿನಲ್ಲಿ ಇಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?

ಐದಾರುವಾಕ್ಯದ ಪ್ರಶ್ನೆಗಳು:-

Ø    ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ ಕೃಷ್ಣೇಗೌಡ ಆನೆಯನ್ನು ಹೇಗೆ ಸಾಕಿದ?
Ø    ಕಾಡಾನೆಗಳ ಹಾವಳಿ ನಿರೂಪಕರ ಅನುಭವಕ್ಕೆ ಬಂದುದು ಹೇಗೆ?
Ø    ಆರಣ್ಯ ಇಲಾಖೆಯ ಶತ್ರುಗಳ ಕಾರ್ಯ ಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ?
Ø    ನಿದ್ರ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ?
Ø    ಡ್ರೈವರ್ ಸಾವಿನ ಸುದ್ದಿಯನ್ನು ಶಿವೆ ಗೌಡ ಮತ್ತಿತರು ಹೇಗೆ ಮುಚ್ಚಿ ಹಾಕಿದರು?
Ø    ಬೀದಿನಾಯಿಗಳ ನಿವಾರಣೆಗೆ ಖಾನ್ ಸಾಹೇಬರು ತೆಗೆದುಕೊಂಡಿದ್ದ ಕ್ರಮಗಳು ಯಾವುವು?
Ø    ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣ ನ ಸಾವಿಗೆ ಕೃಷ್ಣೇ ಗೌಡರ ಆನೆ ಕಾರಣವೇ, ವಿವರಿಸಿ?
Ø    ತನ್ನ ಆನೆಯ ಬಗ್ಗೆ ಕೃಷ್ಣೇ ಗೌಡರಲ್ಲಿ ಬೇಸರಮೂಡಲು ಕಾರಣಗಳೇನು?
Ø    ಆನೆ ಮತ್ತು ವೇಲಾಯುಧನನ್ನು ಸಾಗಿಹಾಕಲು ಮಠದವರು ಹವಣಿಸಿದ್ದೇಕೆ?
Ø    ಟೆಲಿಫೋನ್ ಲೈನ್ ಮನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
Ø    ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?
Ø    ವೇಲಾಯುಧನ ಹೆಂಡತಿಗೆ ಆನೆಯಬಗ್ಗೆ ಸವತಿಮತ್ಸರ ಮೂಡಲು ಕಾರಣವೇನು?

ಕದಡಿದ ಸಲಿಲಂ

ಸಂದರ್ಭದ ಪ್ರಶ್ನೆಗಳು:-
Ø    ಏನಂ ಕೇಳ್ದಪೆನೊ ಪೊಲ್ಲ ವಾರ್ತೆಯನಿನ್.
Ø    ಕದಡಿದ ಸಲಿಲಂ ತಿಳಿವಂದದೆ

ಒಂದುವಾಕ್ಯದ ಪ್ರಶ್ನೆಗಳು:-
Ø    ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು?
Ø    ಮಯತನೂಜೆ ಎಂದರೆ ಯಾರು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಬಹುರೂಪಿಣಿ ವಿದ್ಯೆಯ ಬಗ್ಗೆ ಲಘು ಮಾಹಿತಿ ನೀಡಿರಿ.

ಭಾವಾರ್ಥ:-
Ø    ಗುಣಪರಿಪಾಲನಾರ್ಥ ಎನಗಂ....
Ø    ಇವರಂ ಪ್ರಾಣಪ್ರಿಯರಂ ನೆವಮಿಲ್ಲದೆ....
Ø    ಕದಡಿದ ಸಲಿಲಂ ತಿಳಿವಂದದೆ....

ಐದಾರುವಾಕ್ಯದ ಪ್ರಶ್ನೆಗಳು:-
Ø    ಕದಡಿದ ಸಲಿಲಂ ತಿಳಿವಂದದೆ ಕಾವ್ಯ ಭಾಗದಲ್ಲಿ ಕಂಡು ಬರುವ ರಾವಣನ ವ್ಯಕ್ತಿತ್ವ ವನ್ನು ವಿಮರ್ಶಿಸಿ.
Ø    ರಾವಣ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರಿಸಿ.

ವಚನಗಳು:

ಭಾವಾರ್ಥ:-
Ø    ಪರುಷ ಗೃಹದೊಳಿದ್ದು ತಿರಿವನೆ ಮನೆಮನೆಯ
ಸಂದರ್ಭ:-
ಪುಷ್ಪವಿಲ್ಲದೆ ಪರಿಮಳವನ್ನು ಅರಿಯಬಹುದೆ


ಒಂದುವಾಕ್ಯದ ಪ್ರಶ್ನೆಗಳು:-

Ø    ಶಿವಪಥವನ್ನು ಅರಿಯದಿದ್ದರೆ ಏನಾಗುವುದು?
Ø    ಯಾವುದರಿಂದ ಪರಿಮಳವನ್ನು ಅರಿಯಬಹುದು?
Ø    ಗುರು ಹೇಗೆ ವರ್ತಿಸಬಾರದು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಯಾವಗುಣಗಳು ಇಲ್ಲದವನು ಡಾಂಭಿಕ ಎನಿಸುತ್ತಾನೆ?
Ø    ಯಾವಾಗ ನಿಲಬಹುದು ಯಾವಾಗ ನಿಲಲಾಗದು?
Ø    ಬಸವಣ್ಣನವರ ಪ್ರಕಾರ ನೈಜ ಭಕ್ತಿಯ ಲಕ್ಷಣಗಳು ಯಾವುವು?

ಐದಾರುವಾಕ್ಯದ ಪ್ರಶ್ನೆಗಳು:-
Ø    ರಕ್ಷಿಸಬೇಕಾದವರೇ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?

ಇನ್ನು ಹುಟ್ಟದೆ ಯಿರಲಿ ನಾರಿಯರು ಎನ್ನವೊಲು

ಭಾವಾರ್ಥ:-
Ø    ಕಲಹಕಾದೊಡೆ ನಾವು ರಮಿಸುವರುಳಿದವರು ....
Ø    ಬಸುರಬಗೆವೆನು ಕೀಚಕನ ನಸುಮಿಸುಕಿದೊಡೆ....
Ø    ಎಲ್ಲರೊಳು ಕಲಿಭೀಮನೇ ಮಿಡುಕುಳ್ಳ....

ಸಂದರ್ಭದ ಪ್ರಶ್ನೆಗಳು:-
Ø    ಕಲಿ ಭೀಮನೆ ಮಿಡುಕುಳ್ಳ ಗಂಡನು.
Ø    ಕೂಳುಗೇಡಿಂಗೊಡಲ ಹೊರುವಿರಿ
Ø    ಹಗೆಗಳನು ಹಿಂಡಿದನು ಮನದೊಳಗೆ

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಗಂಡರೈವರು ಮೂರುಲೋಕದ ಗಂಡರಾರು ಹೆಸರಿಸಿ?
Ø    ಗಂಡರೋ ನೀವು ಭಂಡರೋ ಎಂದು ಹೇಳಿದವರಾರು?
Ø    ಸೋದರರ ಬಗ್ಗೆ ಭೀಮನು ವ್ಯಕ್ತ ಪಡಿಸಿದ ಅಭಿಪ್ರಾಯ ಯಾವುದು?

ಐದಾರುವಾಕ್ಯದ ಪ್ರಶ್ನೆಗಳು:-
Ø    ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ಮಾತುಗಳಾವುವು?

ಪಗೆಯಂ ಬಾಲಕನೆಂಬರೇ

ಸಂದರ್ಭದ ಪ್ರಶ್ನೆಗಳು:-
Ø    ಕೆಲವಂ ಬಲ್ಲವರಿಂದ ಕಲ್ತು
Ø    ಇರಿಯಲ್ಬಲ್ಲೊಡೆ ವೀರನಾಗು....

ಒಂದುವಾಕ್ಯದ ಪ್ರಶ್ನೆಗಳು:-
Ø    ನಿಷ್ಪ್ರಯೋಜಕನಾದ ಮಗ ಯಾರು?
Ø    ಯಾರನ್ನು ಯೋಗಿಯೆನಬಹುದು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ರಾಜ ಮಂತ್ತ್ರಿಗಳಿಗೆ ಯಾವ ಅರ್ಹತೆಗಳಿರಬೇಕು?
Ø    ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?

ಐದಾರುವಾಕ್ಯದ ಪ್ರಶ್ನೆಗಳು:-
Ø    ವೀರ, ಮಂತ್ರಿ, ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳು ಏನು?

ಜಾಲಿಯ ಮರದಂತೆ

ಒಂದುವಾಕ್ಯದ ಪ್ರಶ್ನೆಗಳು:-
Ø    ಜಾಲಿಯ ಮರದಂತೆ ಇರುವವರು ಯಾರು?
Ø    ತತ್ವ ಜ್ಞಾನವನ್ನು ಕೇಳದವರು ಯಾರು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಜಾಲಿಯಮರದ ನಿರರ್ಥಕಥೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ?
Ø    ಯಾರಿಗೆ ತತ್ವಜ್ಞಾನವನ್ನು ಹೇಳಿ ಪ್ರಯೋಜನವಿಲ್ಲ?

ಐದಾರುವಾಕ್ಯದ ಪ್ರಶ್ನೆಗಳು:-
Ø    ಸಮಾಜ ಕಂಟಕರ ಬಗೆಗೆ ಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿ?

ಹಬ್ಬಲಿ ಅವರ ರಸಬಳ್ಳಿ

ಸಂದರ್ಭದ ಪ್ರಶ್ನೆಗಳು:-
Ø    ಬಿಸಿಲು ಹೊಳ್ಳೋದು ತಡವಲ್ಲ...
Ø    ನೀ ತಂಪು ನನ್ನ ತವರೀಗೆ

ಒಂದುವಾಕ್ಯದ ಪ್ರಶ್ನೆಗಳು:-
Ø    ಬ್ಯಾಸಗಿದಿವಸಕ್ಕೆ ಯಾವ ಮರ ತಂಪು?
Ø    ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?
Ø    ಹಡೆದ ತಂದೆತಾಯಿಯರ ಮಹತ್ವ ತಿಳಿಸಿರಿ.

ಐದಾರುವಾಕ್ಯದ ಪ್ರಶ್ನೆಗಳು:-
Ø    ತಾಯಿಯಬಗ್ಗೆ ಇರುವ ಅಪಾರ ಪ್ರೀತಿ ಅಭಿಮಾನ ರಸಬಳ್ಳಿಯಲ್ಲಿ ಹೇಗೆ ವ್ಯಕ್ತವಾಗಿದೆ?
Ø    ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?
Ø    ಗರತಿ ತವರಿಗೆ ಏನೆಂದು ಹರಸುತ್ತಾಳೆ?

ಬೆಳಗು ಜಾವ
ಭಾವರ್ಥ:-
Ø    ಬಾನ್ ಹೊಗರಲುಂಟು ಮರಚಿಗುರಲುಂಟು....

ಸಂದರ್ಭದ ಪ್ರಶ್ನೆಗಳು:-
Ø    ಬಲೆಬೀಸಿಬಂದ ಅಗೊ ಬೆಳಕ ಬೇಟೆಗಾರ...
Ø    ಮರಣ ಬಂದೀತು ಕ್ಷಣವು ಉರುಳಿ

ಒಂದುವಾಕ್ಯದ ಪ್ರಶ್ನೆಗಳು:-
Ø    ಹುಸಿನಿದ್ದೆಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
Ø    ಕವಿಯಪ್ರಕಾರ ಯಾವುದು ಮತ್ತೆ ಚಿಗುರುತ್ತದೆ?
ಐದಾರುವಾಕ್ಯದ ಪ್ರಶ್ನೆಗಳು:-
ಬೆಳಗುಜಾವ ಕವನದ ಮೂಲಕ ಬೇಂದ್ರೆಯವರು ಹೇಳಿರುವ ವಿಚಾರಗಳಾವುವು?

ಮುಂಬೈ ಜಾತಕ
ಸಂದರ್ಭದ ಪ್ರಶ್ನೆಗಳು:-
Ø    ನೂರಾರು ಜಾಹಿರಾತುಗಳು ತಲೆಗೆ ತುರುಕಿದ್ದು?
Ø    ಕುಳಿತು ಕೆಮ್ಮುವ ಪ್ರಾಣಿ

ಐದಾರುವಾಕ್ಯದ ಪ್ರಶ್ನೆಗಳು:-
ನಗರ ಜೀವನದ ಯಾಂತ್ರಿಕ ವಿವರಗಳು ಈ ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿದೆ ವಿವರಿಸಿ?

ಶಿಲುಬೆ ಏರಿದ್ದಾನೆ

ಒಂದುವಾಕ್ಯದ ಪ್ರಶ್ನೆಗಳು:-
Ø    ಯಾರ ಕಂಬನಿಯೊರೆಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ?
Ø    ಶಿಲುಬೆಗೇರಿದ ಯೇಸುವಿನ ದೇಹ ಯಾರಿಗೆ, ಏನನ್ನು ಹೇಳುವಂತಿದೆ?
Ø    ಶಿಲುಬೆಗೇರಿಸಿದ ಗುಣಗಳು ಇಂದು ಯಾವವೇಷತಾಳಿವೆ?

ಒಂದು ಹೂ ಹೆಚ್ಚಿಗೆ ಇಡುತ್ತೇನೆ

ಸಂದರ್ಭದ ಪ್ರಶ್ನೆಗಳು:-
Ø    ಮಾತೇ ಮರೆತುಹೋಗಿದೆ ಕಣೆ..

ಒಂದುವಾಕ್ಯದ ಪ್ರಶ್ನೆಗಳು:-
Ø    ಮೊಮ್ಮಗಳು ಏನು ಮಾಡುತಿದ್ದಳು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
ಸೊಸೆಗೆ ಹೊರಗಿನ ಕೆಲಸ ಬರಲಿ ಎಂದು ಮುದುಕಿ ಬಯಸಿದ್ದು ಏಕೆ?

ಹತ್ತಿ... ಚಿತ್ತ... ಮತ್ತು ...
ಒಂದುವಾಕ್ಯದ ಪ್ರಶ್ನೆಗಳು:-
Ø    ತೈಲ ತೀರಿದ್ದು ಹೇಗೆ ತಿಳಿಯುತ್ತದೆ?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಯಾವಯಾವುದಕ್ಕೆ ಹೋಲಿಸಲಾಗಿದೆ?
Ø    ಎಣ್ಣೆ ತೀರಿದ ದೀಪಗಳು ಏನನ್ನು ಸೂಚಿಸುತ್ತವೆ?

ಒಮ್ಮೆ ನಗುತ್ತೇವೆ

ಒಂದುವಾಕ್ಯದ ಪ್ರಶ್ನೆಗಳು:-
Ø    ಕವಯಿತ್ರಿ ಯಾರಲ್ಲಿ ಮೊರೆಯಿಡುತ್ತಾರೆ?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಕವಯಿತ್ರಿ ಮುಗಿಲತ್ತ ಕೈಚಾಚಿ ಏಕೆ ನಿಂತಿದ್ದಾರೆ?
Ø    ದನಗಳಿಗೆ ಜನಗಳಿಗೆ ಏನೇನು ಇಲ್ಲ?

ಮುಟ್ಟಿಸಿಕೊಂಡವನು
ಸಂದರ್ಭದ ಪ್ರಶ್ನೆಗಳು:-
Ø    ಅವನು ನನ್ನಷ್ಟೇ ಒಳ್ಳೆಯ್ ಡಾಕ್ಟರು, ಏನೂ ತಪ್ಪು ತಿಳಿಬೇಡ.

ಒಂದುವಾಕ್ಯದ ಪ್ರಶ್ನೆಗಳು:-
Ø    ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಿಗೆ ಇದ್ದ ಅಭಿಪ್ರಾಯವೇನು?
Ø    ಅನ್ಯ ಡಾಕ್ಟರರು ಬಸಲಿಂಗನ ಕಾಯಿಲೆಯ ಬಗ್ಗೆ ಏನೆಂದು ಪ್ರತಿಕ್ರಯಿಸಿದರು?
Ø    ಬಸಲಿಂಗನಿಗೆ ಮೊದಲು ಯಾವ ಕಣ್ಣಿನಲ್ಲಿ ನೋವು ಆರಂಭವಾಯಿತು?

ಐದಾರುವಾಕ್ಯದ ಪ್ರಶ್ನೆಗಳು:-
Ø    ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು, ಅದಕ್ಕೆ ಕಾರಣಗಳೇನು?
Ø    ‘ಮುಟ್ಟಿಸಿಕೊಂಡವನು’ ಕತೆಯಲ್ಲಿ ಕೊನೆಗೆ ಕಂಡುಬರುವ ಸನ್ನಿವೇಶವನ್ನು ಅವಲೋಕಿಸಿ?
Ø    ಬಸಲಿಂಗ ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದಿರಲು ಕಾರಣಗಳೇನು?
Ø    ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?

ವಾಲ್ ಪರೈ: ಅಭಿವೃದ್ಧಿ ತಂದ ದುರಂತ
ಸಂದರ್ಭ  ;- ಅದು ಅವರು ಆವರೆಗೂ ನೋಡಿರದ ಪ್ರಾಣಿ
ಒಂದುವಾಕ್ಯದ ಪ್ರಶ್ನೆಗಳು:-
Ø    ಬ್ರಿಟೀಷರ ಯಾವ ಗುಣವನ್ನು ಮೆಚ್ಚಬೇಕು?
Ø    ಕೆಂಪು ಪಟ್ಟಿಗೆ ಸೇರಿದ ಪ್ರಾಣಿ ಯಾವುದು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಬ್ರಿಟೀಷರು ಬರುವ ಮೊದಲು ವಾಲ್ ಪರೈ ಹೇಗಿತ್ತು?
Ø    ಕೈಗಾರಿಕೋದ್ಯಮಿಗಳಿಂದ ಕಾಡು ನಾಶ ವಾದುದು ಹೇಗೆ?
Ø    ಸಿಂಹಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು?

ಐದಾರುವಾಕ್ಯದ ಪ್ರಶ್ನೆಗಳು:-
Ø    ಅಭಿವೃದ್ಧಿತರುವ ಪ್ರಾಕೃತಿಕ ನಾಶದ ಸ್ವರೂಪವನ್ನು ಈ ಪಠ್ಯದ ಹಿನ್ನಲೆಯಲ್ಲಿ ಚರ್ಚಿಸಿ?

ಆಯ್ಕೆಯಿದೆ ನಮ್ಮ ಕೈಯಲ್ಲಿ

ಸಂದರ್ಭದ ಪ್ರಶ್ನೆಗಳು:-
Ø    ನೋಡು, ನಿನ್ನ ಎದುರು ಎರಡು ಆಯ್ಕೆಗಳಿವೆ..
Ø    ಮುಂಬೈಯ ಪ್ರಸಿದ್ಧ ನ್ಯಾಯವಾದಿಯಾದರು..
Ø    ಎಷ್ಟುಬೇಕಾದರೂ ಓದಿಸಲು ಸಿದ್ದರಿದ್ದ ಅಪ್ಪಂದಿರು

ಒಂದುವಾಕ್ಯದ ಪ್ರಶ್ನೆಗಳು:-
Ø    ಲೇಖಕಿಯ ಪತಿಯನ್ನು ಸೋನಾಗ್ರಫಿ ರೂಮಿಗೆ ಕರೆದೊಯ್ದುದೇಕೆ?
Ø    ಅದೃಷ್ಟದ ಪ್ರಶ್ನೆ ಬಂದಾಗೆ ಲೇಖಕಿಗೆ ಯಾರು ನೆನಪಾಗುತ್ತಾರೆ?
Ø    ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಸೀತಾಳಾ ಬಯಕೆ, ನಂಬಿಕೆಗಳು ಹೇಗಿದ್ದವು?
Ø    ತಾನು ಅದೃಷ್ಟವಂತೆ ಎಂದು ಲೇಖಕಿ ಭಾವಿಸಲು ಕಾರಣವೇನು?

ಐದಾರುವಾಕ್ಯದ ಪ್ರಶ್ನೆಗಳು:-
Ø    ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿಹೋಗಿದ್ದು ಹೇಗೆ?


ಕನ್ನಡವನ್ನು ಕಟ್ಟುವ ಕೆಲಸ
ಸಂದರ್ಭ :- ಕನ್ನಡಿಗರು ಮೊದಲು ಕನ್ನಡಿಗರಾಗಬೇಕು
ಒಂದುವಾಕ್ಯದ ಪ್ರಶ್ನೆಗಳು:-
Ø    ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೂ ಇದ್ದೇ ಇರುತ್ತದೆ?
Ø    ಸಾರ್ವಜನಿಕ ಶಾಲೆಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?

ಐದಾರುವಾಕ್ಯದ ಪ್ರಶ್ನೆಗಳು:-
Ø    ಕೇಂದ್ರ ಸರಕಾರದ ಕಚೇರಿಗಳಲ್ಲಿ ಕನ್ನಡತನವಿಲ್ಲವಿರುವ ಬಗ್ಗೆ ಹಾಮಾನಾ ಹೇಗೆ ಟೀಕಿಸಿದ್ದಾರೆ?
Ø    ಕನ್ನಡಿಗರೆನಿಸಿಕೊಳ್ಳಲು ಯಾವ ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು, ವಿವರಿಸಿ?

ಧಣಿಗಳ ಬೆಳ್ಳಿಲೋಟ

ಒಂದುವಾಕ್ಯದ ಪ್ರಶ್ನೆಗಳು:-
Ø    ಧಣಿಗಳ ದಾಂಪತ್ಯಕ್ಕೆ ಯಾವುದು ಮೂಕ ಸಾಕ್ಷಿಯಾಗಿತ್ತು?
Ø    ಗುಡ್ಡ ಹೊಳೆಯಲ್ಲಿ ಯಾವ ಆಟ ಆಡುತ್ತಿದ್ದನು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಮುಂಜಾನೆ ಚಿನ್ನಮ್ಮ ಯಾವ ಕೆಲಸದಲ್ಲಿ ತೊಡಗಿದ್ದಳು?
Ø    ಮುಸುರೆಪಾತ್ರೆಗಳು ನೀರುಪಾಲಾದುದು ಹೇಗೆ? ಅವುಗಳನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳೇನು?
ಐದಾರುವಾಕ್ಯದ ಪ್ರಶ್ನೆಗಳು:-
ದಣಿ ಮತ್ತು ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.
ಬದುಕನ್ನು ಪ್ರೀತಿಸಿದ ಸಂತ
ಸಂದರ್ಭದ ಪ್ರಶ್ನೆಗಳು:-
Ø    ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು.
Ø    ಮಗುವೇ ಮೊದಲ ವಿಜ್ಞಾನಿ.

ಒಂದುವಾಕ್ಯದ ಪ್ರಶ್ನೆಗಳು:-
Ø    ಭೂಮಿಯಮೇಲಿನ ಮೊದಲ ವಿಜ್ಞಾನಿ ಯಾರು?
Ø    ವಿಜ್ಞಾನದ ಅಡಿಪಾಯ ಯಾವುದು?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಕಲಾಂ ಅವರ ಬದುಕಿನ ಮಂತ್ರ ಯಾವುದು?
Ø    ಕಲಾಂ ಆತ್ಮಕತೆ ಬರೆದುದು ಏತಕ್ಕಾಗಿ?
Ø    ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿಮಂತ್ರ ಯಾವುದು?


ತಿರುಳ್ಗನ್ನಡದ ಬೆಳ್ನುಡಿ

ಸಂದರ್ಭದ ಪ್ರಶ್ನೆಗಳು:-
Ø    ಕನ್ನಡಂ ಕತ್ತುರಿಯಲ್ತೆ.

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಸಂಸ್ಕೃತ ಕನ್ನಡಗಳು ಸೇರಿದರೆ ಹೇಗೆ ಸೊಗಯಿಸುತ್ತದೆ?
Ø    ಮನೋರಮೆ ಮುದ್ದಣನನ್ನು ಹೇಗೆ ಉಪಚರಿಸಿದಳು?

ಐದಾರುವಾಕ್ಯದ ಪ್ರಶ್ನೆಗಳು:-
Ø    ಮುದ್ದಣ ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ?

ಹಳ್ಳಿಯ ಚಹಾ ಹೋಟೆಲುಗಳು

ಒಂದುವಾಕ್ಯದ ಪ್ರಶ್ನೆಗಳು:-
Ø    ಕಲಿಯುಗದ ಅಮೃತ ಯಾವುದು?
Ø    ಬಾಯಿ ಚಪಲ ಯಾರಿಗೆ ಜಾಸ್ತಿ ಇರುತ್ತದೆ?

ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø    ಭಾವೈಕ್ಯತೆ ಈ ದೇಶದಲ್ಲಿ ಎಲ್ಲಿದೆ?
Ø    ಪಟ್ಟಣದ ಹೊಟೆಲಿನ ಕಟ್ಟಡ ಹೇಗಿದೆ?

ಐದಾರುವಾಕ್ಯದ ಪ್ರಶ್ನೆಗಳು:-


Ø    ಹಳ್ಳಿಯ ಚಹಾ ಅಂಗಡಿಯನ್ನು ಲೇಖಕರು ಹೇಗೆ ಪರಿಚಯಿಸಿದ್ದಾರೆ?

No comments:

Post a Comment